ಅಭಿಪ್ರಾಯ / ಸಲಹೆಗಳು

ಸೇವೆಗಳು

            ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಭಂಡಾರವೇ ಆಗಿದೆ. ಇತಿಹಾಸಕ್ಕೆ ಮೂಲಾಧಾರವಾದ ದಾಖಲೆಗಳು ಇಲ್ಲಿವೆ. ಮೈಸೂರಿನ ಇತಿಹಾಸ, ಮೈಸೂರಿನಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ, ಹೈದರಾಲಿ, ಟಿಪ್ಪುಸುಲ್ತಾನರು, ಫ್ರಾನ್ಸ್ ದೇಶದೊಡನೆ ಸಂಪರ್ಕ ನಡೆಸಿದ ಬಗ್ಗೆ ಪ್ರೆಂಚ್ ದಾಖಲೆಗಳು, ಮೈಸೂರು ಕಾಂಗ್ರೆಸ್ ಪಕ್ಷವು ಮೈಸೂರು ಸಂಸ್ಥಾನದಿಂದ ಬ್ರಿಟಿಷರನ್ನು ಹೊರದೂಡಲು ಪ್ರಯತ್ನಿಸಿದ ಕಾರ್ಯ ಮತ್ತು ಏಕೀಕರಣ ಚಳುವಳಿ ಇತ್ಯಾದಿ ದಾಖಲೆಗಳು ಇಲ್ಲಿವೆ. ಇದರ ಜೊತೆಗೆ ಕನ್ನಡ, ಮರಾಠಿ, ಮೋಡಿ ದಾಖಲೆಗಳು, ಗೆಜೆಟ್‍ಗಳು (1866) ದೊರಕುತ್ತವೆ. ಸಾಕಷ್ಟು ದಾಖಲೆಗಳು ಇಂಗ್ಲೀಷ್ ಭಾಷೆಯಲ್ಲಿವೆ. ಜನಸಾಮಾನ್ಯರು, ಸಂಶೋಧಕರು, ಪಂಡಿತರು, ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ ವರ್ಗದವರು, ಅರೆ ಸರ್ಕಾರಿ ಸಂಸ್ಥೆಗಳು ಈ ದಾಖಲೆಗಳ ಉಪಯೋಗವನ್ನು ಪಡೆಯುತ್ತಿದ್ದಾರೆ.

 

ವಿವಿಧ ಇಲಾಖೆಗಳ ದಾಖಲೆಗಳ ಶ್ರೇಣಿಗಳು ಕೆಳಕಂಡಂತಿವೆ:

 

ಸಾಮಾನ್ಯ (ಮಿಸಲೇನಿಯಸ್) (1836-1942) ಅರಮನೆಯ ಪತ್ರಗಳು(1867-1923)
ಕೊಡಗು ಪ್ರಾಂತ್ಯ (1952-1955) ದಿವಾನರ ವ್ಯವಹಾರ ಪತ್ರಗಳು (1899-1906)
ಆರ್ಥಿಕ ಸಮ್ಮೇಳನಗಳು (1917-1922) ಪೊಲೀಸ್ (1832-1942)
ನೈಪುಣ್ಯತೆ ಮತ್ತು ಸಾಮಾನ್ಯ ರೂಲ್ಸ್ ಕೈಗಾರಿಕೆ ಮತ್ತು ವಾಣಿಜ್ಯ (1872-1946)
ಕಂದಾಯ ಇಲಾಖೆ (1904-1924) ಸರ್ಕಾರಿ ತೋಟಗಾರಿಕೆ(1926-1942)
ಸ್ಥಳೀಯ ಪರೀಕ್ಷೆಗಳು (1877-1925) ಹಣಕಾಸು (1903-1942)
ಸ್ಥಳೀಯ ಸಂಸ್ಥೆಗಳು (1837-1943) ಸಾಮಾನ್ಯ ಹಣಕಾಸು (1845)
ಸುಂಕ (1918-1926) ಧಾರ್ಮಿಕ ದತ್ತಿ (1846-1943)
ವೈದ್ಯಕೀಯ (1831-1942) ಮುನಿಸಿಪಲ್ (1811-1945)
ವಿದ್ಯಾ ಇಲಾಖೆ (1851-1953) ಕೃಷಿ (1836-1942)
ಪ್ರೆಸ್(1862-1925) ಮಿಲಿಟರಿ (ಸೇನೆ) (1840-1942)
ಅಂಕಿ ಅಂಶಗಳು (1864-1926) ಕಾನೂನು (1927-1942)
ಪಶುಸಂಗೋಪನೆ (1871-1902) ರಹಸ್ಯ ವಿಭಾಗ (1913-1943)
ಅರಣ್ಯ (1836-1943) ಗಣಿಗಾರಿಕೆ (1915-1942)
ಬ್ಯಾಕಿಂಗ್ (1871-1902) ಭೂ ಸರ್ವೇಕ್ಷಣೆ (1860-1947)
ಶಾಸನ ಸಭೆ (1904-1942) ನ್ಯಾಯಾಲಯ (1835-1925)
ಸೆರೆಮನೆ (1859-1942) ರಸ್ತೆ ತೆರಿಗೆಗಳು (1936-1942)
ಒಳಚರಂಡಿ (1862-1900)

 

        ಸಂಶೋಧಕರ ಮತ್ತು ಜನಸಾಮಾನ್ಯರ ಉಪಯೋಗಕ್ಕಾಗಿ ಹಲವು ಸೇವಾ ಸೌಲಭ್ಯಗಳಿವೆ. ಪ್ರಮುಖವಾಗಿ ಮೌಖಿಕ ಇತಿಹಾಸದ ಧ್ವನಿಸುರುಳಿಗಳು, ಮೈಕ್ರೋಫಿಲಂ ರೋಲ್‍ಗಳು ಮತ್ತು ಐತಿಹಾಸಿಕ ದಾಖಲೆಗಳ ಪಟ್ಟಿ ಎಲ್ಲರ ಉಪಯೋಗಕ್ಕಾಗಿ ದಾಖಲೆಗಳ ಜೆರಾಕ್ಸ್ ಹಾಗೂ ಮೈಕ್ರೋಫಿಲಂ ಕಾಪಿಗಳನ್ನು ಇಲಾಖೆ ಒದಗಿಸುತ್ತಿದೆ. 35 ವರ್ಷ ಹಳೆಯ ದಾಖಲೆಗಳನ್ನು ಸಂಶೋಧಕರಿಗೆ, ಜನಸಾಮಾನ್ಯರಿಗೆ ತೆರೆದಿಡಲಾಗಿದೆ. ಖಾಸಗಿಯವರಿಂದ ಸಂಗ್ರಹಿಸಲ್ಪಟ್ಟ ದಾಖಲೆಗಳನ್ನು ಸಹ ಸಂಶೋಧಕರಿಗೆ ಒದಗಿಸಲಾಗುವುದು.

 

ಇತ್ತೀಚಿನ ನವೀಕರಣ​ : 26-03-2021 11:52 AM ಅನುಮೋದಕರು: DIRECTOR-KSAಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080