ಅಭಿಪ್ರಾಯ / ಸಲಹೆಗಳು

ಉದ್ದೇಶಗಳು

 •     ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ದಾಖಲಾತಿ ಮತ್ತು ಕಡತಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
 • ಸರ್ಕಾರದ ವಿವಿಧ ಇಲಾಖೆಗಳು ಗುರುತಿಸಿದಂತೆ ಅವಧಿ ಮೀರಿದ ಕಡತಗಳನ್ನು ಸಮಯಕ್ಕೆ ಸರಿಯಾಗಿ ನಾಶಪಡಿಸಿ ಆಡಳಿತವನ್ನು ಸುಗಮಗೊಳಿಸಲು ಸಹಕರಿಸುವುದು.
 • ಚಾಲ್ತಿಯಲ್ಲಿಲ್ಲದ ಮತ್ತು ರಹಸ್ಯವಲ್ಲದ ಸರ್ಕಾರಿ ದಾಖಲಾತಿಗಳನ್ನು ಸಂಶೋಧಕರಿಗೆ, ಪಂಡಿತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮವಹಿಸಿ ಅವರ ಜ್ಞಾರ್ನಾಜನೆಗೆ ಸಹಾಯ ಮಾಡುವುದು.
 • ಸ್ವಾಯತ್ತ ಸಂಘ-ಸಂಸ್ಥೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹಾಗೂ ವ್ಯಕ್ತಿಗಳಲ್ಲಿರುವ ಚಾರಿತ್ರಿಕ ಮೌಲ್ಯವಿರುವ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮತ್ತು ಅವರ ಸಹಕಾರದಿಂದ ಅವುಗಳನ್ನು ಸ್ವಾಧೀನಪಡಿಸಿಕೊಂಡು ವೈಜ್ಞಾನಿಕವಾಗಿ ಸಂರಕ್ಷಿಸುವುದು.
 • ನಶಿಸಿಹೋಗುತ್ತಿರುವ ಐತಿಹಾಸಿಕ ಮೌಲ್ಯದ ಸರ್ಕಾರಿ ಮತ್ತು ಖಾಸಗಿ ದಾಖಲಾತಿಗಳನ್ನು ಮೈಕ್ರೋಫಿಲಂ ಮಾಡಿಸುವುದು ಮತ್ತು ಕಂಪ್ಯೂಟರ್ ಸ್ಕ್ಯಾನ್ ಮಾಡಿಸಿ ವೈಜ್ಞಾನಿಕವಾಗಿ ಸಂರಕ್ಷಿಸುವುದು.
 • ಪತ್ರಾಗಾರ ಇಲಾಖೆಯಲ್ಲಿರುವ ಮತ್ತು ಖಾಸಗಿ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳಲ್ಲಿರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ದಾಖಲಾತಿಗಳನ್ನು ಪ್ರಕಟಿಸಿ ಅವಶ್ಯಕವಿರುವವರಿಗೆಲ್ಲಾ ಲಭ್ಯವಾಗುವಂತೆ ಮಾಡುವುದು.
 • ಖಾಸಗಿ ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅವರಲ್ಲಿರುವ ಅಮೂಲ್ಯವಾದ ಐತಿಹಾಸಿಕ ದಾಖಲಾತಿಗಳನ್ನು ಸಂರಕ್ಷಿಸಲು ಸಲಹೆ ಮತ್ತು ತರಬೇತಿ ನೀಡುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಧನ ಸಹಾಯಕ್ಕೆ ಶಿಫಾರಸ್ಸು ಮಾಡುವುದು.
 • ಪತ್ರಾಗಾರದಲ್ಲಿ ಆಳವಾದ ಜ್ಞಾನ ಮತ್ತು ಆಸಕ್ತಿಯಿರುವ ಖಾಸಗಿ ಸಂಘ-ಸಂಸ್ಥೆಗಳ ಮತ್ತು ವ್ಯಕ್ತಿಗಳ ಸಹಕಾರದೊಂದಿಗೆ ಎಲ್ಲೆಲ್ಲಿ ಅಮೂಲ್ಯವಾದ ಖಾಸಗಿ ದಾಖಲಾತಿಗಳಿವೆಯೋ ಅವುಗಳನ್ನು ಪರಿವೀಕ್ಷಣೆ ಮೂಲಕ ಪತ್ತೆ ಹಚ್ಚಿ ಸಮಾಜದ ಉಪಯೋಗಕ್ಕಾಗಿ ಅವುಗಳ ಸಂರಕ್ಷಣೆಗೆ ಸಹಾಯ ಮಾಡುವುದು.

ಇತ್ತೀಚಿನ ನವೀಕರಣ​ : 03-04-2021 02:35 PM ಅನುಮೋದಕರು: DIRECTOR-KSA


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080