ಅಭಿಪ್ರಾಯ / ಸಲಹೆಗಳು

ಚಟುವಟಿಕೆಗಳು

        ಕರ್ನಾಟಕ ಸರ್ಕಾರದ ಸಚಿವಾಲಯವು ರಾಜ್ಯದ ಸಂಪೂರ್ಣ ಆಡಳಿತದ ಕೇಂದ್ರ ಬಿಂದುವಾಗಿರುವುದರಿಂದ, ಇಲ್ಲಿಯ ಕಡತಗಳು ಸಮಗ್ರ ಆಡಳಿತದ ಪ್ರತಿಬಿಂಬವಾಗಿದ್ದು, ಇತಿಹಾಸಕಾರರಿಗೆ ಮತ್ತು ವಿದ್ವಾಂಸರಿಗೆ ಅತ್ಯವಶ್ಯಕವಾದ ದಾಖಲಾತಿಗಳಾಗಿರುವುದರಿಂದ ಅವುಗಳನ್ನು ಎ,ಬಿ,ಸಿ ವರ್ಗೀಕರಣದಲ್ಲಿ ವಿಂಗಡಿಸಿ ಕಾಪಾಡುವುದು. ಸಚಿವಾಲಯದ್ದಲ್ಲದೇ, ಅತ್ಯಂತ ಪ್ರಮುಖವಾದ ಮತ್ತು ಶಾಶ್ವತವಾಗಿ ಇಡಬೇಕಾದಂತಹ ಮೈಸೂರು, ಕೆಳದಿ, ಹಳೇ ನಗರ, ವಿಜಯನಗರ, ಕೊಡಗು ಹೈದ್ರಾಬಾದ್ ಸಂಸ್ಥಾನ, ಮಡ್ರಾಸ್ ಮತ್ತು ಮುಂಬೈ ಪ್ರಾಂತ್ಯಗಳ ಇತ್ಯಾದಿ ರಾಜರುಗಳ ಮತ್ತು ಜಿಲ್ಲಾ ಕಂದಾಯ ಇಲಾಖೆ ಮುಂತಾದವುಗಳಲ್ಲಿರುವ ಸಾರ್ವಜನಿಕ ದಾಖಲೆಗಳನ್ನು ಸಂರಕ್ಷಿಸುವುದು.

        ಸಚಿವಾಲಯದ ವಿವಿಧ ಇಲಾಖೆಗಳಿಂದ ಸ್ವೀಕೃತವಾದ ಕಡತಗಳನ್ನು ವರ್ತಮಾನದ ಕಡತಗಳು, 30ವರ್ಷಗಳ ಹಳೆಯ ಕಡತಗಳು ಎಂಬುದಾಗಿ ವರ್ಗೀಕರಿಸಿ ಇಲಾಖೆಯ ಸಾರ್ವತ್ರಿಕ ಶಾಖೆಯಲ್ಲಿ ಅವುಗಳನ್ನು ನಿರ್ವಹಿಸಿ ಅವುಗಳಿಗೆ ಸೂಚಿಯನ್ನು ತಯಾರಿಸಿ ಆಯಾಯಾ ಇಲಾಖೆಗಳಿಗೆ ಬೇಕಾಗುವ ಕಡತಗಳನ್ನು ಕೋರಿಕೆ ಮೇರೆಗೆ ಒದಗಿಸುವುದು. ಕರ್ನಾಟಕದ ಉಚ್ಛ ನ್ಯಾಯಾಲಯದ  ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮುಂತಾದ ಸ್ವಾಯತ್ತ ಸಂಸ್ಥೆಗಳಿಂದ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳಿಂದ ಐತಿಹಾಸಿಕ ಮೌಲ್ಯವಿರುವ ದಾಖಲಾತಿಗಳನ್ನು ಅವರುಗಳ ಸಹಕಾರ ಮತ್ತು ಅನುಮತಿಯಿಂದ ಪಡೆದು ಸಂರಕ್ಷಿಸುವುದು. ಸರ್ಕಾರವು ಕಾಲಕಾಲಕ್ಕೆ ನೇಮಿಸುವ ಸಮಿತಿ/ಕಮೀಷನ್ ಗಳನ್ನು ಹೊರಡಿಸುವ ವರದಿಗಳನ್ನು ಮತ್ತು ದಾಖಲಾತಿಗಳನ್ನು ಸ್ವೀಕರಿಸಿ ಸಂರಕ್ಷಿಸುವುದು.

      ಹಳೇಕಾಲದಿಂದ ಬಂದಿರುವ ಮಠಗಳಲ್ಲಿರುವ, ಪಾಳೇಗಾರರು ಮತ್ತು ರಾಜ ವಂಶದ ಕುಟುಂಬಗಳಲ್ಲಿರುವ ಮತ್ತು ಸಮಾಜದ ಏಳಿಗೆಗಾಗಿ ದುಡಿದ ಮಹನೀಯರುಗಳಲ್ಲಿರುವ ಐತಿಹಾಸಿಕ ಮೌಲ್ಯದ ದಾಖಲಾತಿಗಳ ಪರಿವೀಕ್ಷಣೆ ಮತ್ತು ಅವರುಗಳ  ಸಹಕಾರದಿಂದ ಅವುಗಳನ್ನು ನಿರ್ದೇಶನಾಲಯದ ವಶಕ್ಕೆ ತೆಗೆದುಕೊಂಡು ಕಾಪಾಡುವುದು. ಸರ್ಕಾರದಿಂದ ಪ್ರಕಟವಾಗುವ ವರದಿಗಳು, ಬ್ಲೂ ಪುಸ್ತಕಗಳು, ಗೆಜೆಟ್ ಗಳು ಮತ್ತು ಇತರೆ ಪ್ರಕಟಣೆಗಳನ್ನು ಪಡೆದು ಸಂರಕ್ಷಿಸುವುದು ಮತ್ತು ಎಲ್ಲಾ ಕಾಲದಲ್ಲೂ ಅವುಗಳನ್ನು ಸಂಶೋಧಕರಿಗೆ ಮತ್ತು ಅವಶ್ಯಕವಿರುವವರಿಗೆ ಒದಗಿಸುವುದು. ಸರ್ಕಾರದ ವಿವಿಧ ಇಲಾಖೆಗಳು ಆಗಿಂದಾಗ್ಗೆ ಹೊರಡಿಸುವ ಸೂಚನೆ, ಆದೇಶ, ಸುತ್ತೋಲೆ ಇತ್ಯಾದಿಗಳನ್ನು, ಪ್ರತಿಗಳನ್ನು ಆಯಾಯಾ  ಇಲಾಖೆಗಳಿಂದ ಪಡೆದು ಅವುಗಳನ್ನು ಅವಶ್ಯಕವಿರುವವರಿಗೆ ಒದಗಿಸುವುದು.


      ಸಂಶೋಧಕರಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚರಿತ್ರೆಯ ಬಗ್ಗೆ ಅದರಲ್ಲೂ ಕರ್ನಾಟಕದ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಉತ್ತಮ ಪುಸ್ತಕಗಳನ್ನು ಹಾಗೂ ಪ್ರಕಟಣೆಗಳನ್ನು ಒಳಗೊಂಡಂತಹ ಉತ್ತಮ ಮಟ್ಟದ ಪತ್ರಾಗಾರ ಗ್ರಂಥಾಲಯವನ್ನು ನಿರ್ವಹಿಸುವುದು. ಪತ್ರಾಗಾರದ ದಾಖಲೆಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮತ್ತು ಅವುಗಳ ಸಂರಕ್ಷಣೆ ಬಳಕೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಪತ್ರಾಗಾರ ಪ್ರದರ್ಶನ, ವಿಚಾರ ಸಂಕಿರಣ ಮತ್ತು ಚರ್ಚಾ ಕೂಟ ಮುಂತಾದವುಗಳನ್ನು ಏರ್ಪಡಿಸುವುದು. ರಾಷ್ಟ್ರೀಯ ಸಂಸ್ಥೆಗಳಾದ ಭಾರತ ಇತಿಹಾಸ ಕಾಂಗ್ರೆಸ್ಸ್, ದಕ್ಷಿಣ ಭಾರತದ ಇತಿಹಾಸ ಕಾಂಗ್ರೆಸ್ಸ್, ಕರ್ನಾಟಕ ಇತಿಹಾಸ ಕಾಂಗ್ರೆಸ್ಸ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯಾದ ದಕ್ಷಿಣ-ಪೂರ್ವ ಏಷಿಯಾ ಕಾಂಗ್ರೆಸ್ ಗಳು ಏರ್ಪಡಿಸುವ ಸಮ್ಮೇಳನಗಳ ಭಾಗವಹಿಸುವುದು.

        ಈ ನಿರ್ದೇಶನಾಲಯವು, ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವೆನಿಸಿದ ಧ್ವನಿ ಇತಿಹಾಸ ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಸೇನೆಯ ಮಹಾದಂಡನಾಯಕರು, ರಾಜಕೀಯ ಧುರೀಣರು ಮತ್ತಿತರ ಧ್ವನಿಯನ್ನು ಆಡಿಯೋ - ವಿಡಿಯೋ ರೆಕಾರ್ಡಿಂಗ್ ಮಾಡಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲಾಗಿದೆ. ಜೊತೆಗೆ ದೇಶಕ್ಕೆ ಮೊದಲೆಂಬಂತೆ ಇಲಾಖೆಯು ಆಯ್ದ 2 ಕೋಟಿ ಐತಿಹಾಸಿಕ ದಾಖಲೆಗಳನ್ನು ಅಂತರ್ಜಾಲ ತಾಣದ ಮೂಲಕ ಸಾರ್ವಜನಿಕ ಉಪಯೋಗಕ್ಕೆ ಒದಗಿಸಲಾಗಿದ್ದು, ಈ ಯೋಜನೆ ಮುಂದುವರೆದಿದೆ.

 

ಗಣಕೀಕರಣ:

 

        ಮಾಹಿತಿ ತಂತ್ರಜ್ಞಾನ ಸೃಷ್ಟಿಸಿದ ಹೊಸ ಅಲೆಯನ್ನು ಬಳಸಿ ಪತ್ರಾಗಾರ ನಿರ್ದೇಶನಾಲಯವು ಐತಿಹಾಸಿಕ ದಾಖಲೆಗಳನ್ನು ಗಣಕೀಕರಣಗೊಳಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿಲ್ಲ. ಕರ್ನಾಟಕ ರಾಜ್ಯ ಪತ್ರಾಗಾರವು ತನ್ನ ಆಕರ ಮಾಧ್ಯಮಗಳನ್ನು (ರೆಫರೆನ್ಸ್ ಮೀಡಿಯಾ) ಗಣಕೀಕರಣಗೊಳಿಸಿ ಅಂತರ್ಜಾಲ ತಾಣಕ್ಕೆ ಅಳವಡಿಸಿಕೊಳ್ಳುವುದರಲ್ಲಿ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

 

        ಸಾವಿರಾರು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ ಹಾಗೂ ಇವುಗಳಿಗೆ ಸರ್ಚ್ ಇಂಜಿನ್ ಎಂಬ ಹುಡುಕುವ ವಿಧಾನವನ್ನು ಅಳವಡಿಸಲಾಗಿದ್ದು, ಈ ಸಾಧನದಿಂದ ಸಂಶೋಧಕರು ಹಾಗೂ ಸಾರ್ವಜನಿಕರು ಕ್ಷಣ ಮಾತ್ರದಲ್ಲಿ ದಾಖಲೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಪತ್ರಾಗಾರ ಇಲಾಖೆಯ ದಾಖಲೆಗಳ ಗಣಕೀಕೃತವಾದ ಹಾಗೂ ಸ್ಕ್ಯಾನ್ ಮಾಡಿದ ಮಾಹಿತಿಯೂ ಡಿಜಿಟಲ್ ಮಾಧ್ಯಮದಲ್ಲಿ ಸಾರ್ವಜನಿಕರ ಹಾಗೂ ಸಂಶೋಧಕರ ಉಪಯೋಗಕ್ಕೆ ಲಭ್ಯವಿದೆ.ಇತ್ತೀಚಿನ ನವೀಕರಣ​ : 03-04-2021 02:36 PM ಅನುಮೋದಕರು: DIRECTOR-KSA


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080